pages

Thursday 18 August 2016

Welcome

ಕರ್ನಾಟಕ  ಸರ್ಕಾರ ಸಚಿವಾಲಯ ನೌಕರರ ಸಂಘದ ಅದ್ಯಕ್ಷರಾದ 
ಶ್ರೀ ಮಹದೇವಯ್ಯ ಮಠಪತಿರವರಿಗೆ 
ಕಾಂ|| ಮೇರಿ ದೇವಾಸಿಯ ಪ್ರಶಸ್ತಿ ಪ್ರದಾನ-
೨೬-೦೮-೨೦೧೬- ವಿಧಾನ ಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ನಡಯುತ್ತಿರುವ ಕಾರ್ಯಕ್ರಮ





=======================================================================
➡ *ರಾಜ್ಯ ಸರ್ಕಾರಿ ನೌಕರರ ವೇತನ ಹೆಚ್ಚಳಕ್ಕೆ ಚಿಂತನೆ*ಮುಖ್ಯಮಂತ್ರಿ ಸಿದ್ದರಾಮಯ್ಯ 

ಬೆಂಗಳೂರು,ಆ.25- ರಾಜ್ಯ ಸರ್ಕಾರಿ ನೌಕರರ ವೇತನ ಪರಿಷ್ಕರಣೆಗೆ ಸಂಬಂಧಿಸಿದಂತೆ ವೇತನ ಆಯೋಗ ರಚಿಸುವ ಬಗ್ಗೆ ಚಿಂತನೆ ನಡೆಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ವಿಧಾನಸೌಧದಲ್ಲಿ ನಡೆದ ಕರ್ನಾಟಕ ಸರ್ಕಾರ ಸಚಿವಾಲಯ ನೌಕರರ ಸಂಘದ ವಜ್ರ ಮಹೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. ಅವರು, ಮತ್ತೊಂದು ವೇತನ ಆಯೋಗವನ್ನು ರಚಿಸುವ ಸಮಯ ಬಂದಿದೆ. ಸರ್ಕಾರಿ ನೌಕರರು ಮತ್ತು ಅಧಿಕಾರಿಗಳು ಕೇಂದ್ರ ಸರ್ಕಾರಿ ನೌಕರರಿಗೆ ಸರಿಸಮಾನವಾದ ವೇತನ ನೀಡಬೇಕು ಎಂದು ಬೇಡಿಕೆ ಇಟ್ಟಿದ್ದಾರೆ. ಇದು ಬಹಳ ವರ್ಷಗಳಿಂದಲೂ ಇದೆ ಎಂದರು. *ವೇತನ ಆಯೋಗ ರಚನೆ ಮಾಡವ ಬಗ್ಗೆ ಸರ್ಕಾರದ ಮಟ್ಟದಲ್ಲಿ ನಿರ್ಧಾರ ಕೈಗೊಳ್ಳಲಾಗುವುದು,* ಕೇಂದ್ರ ಸರ್ಕಾರ ಈಗಾಗಲೇ 7ನೇ ವೇತನ ಆಯೋಗದ ಶಿಫಾರಸು ಒಪ್ಪಿದೆ ಎಂಬ ವಿಚಾರವನ್ನು ತಮ್ಮ ಗಮನಕ್ಕೆ ತಂದಿದ್ದಾರೆ ಎಂದರು.
ಸಚಿವಾಲಯ ನೌಕರರ ಸಂಘಕ್ಕೆ ನಿವೇಶನ ನೀಡುವ ಹಾಗೂ ವಿಧಾನ ಮಂಡಲ ಅಧಿವೇಶನದ ಸಂದರ್ಭದಲ್ಲಿ ವಿಶೇಷ ಭತ್ಯ ನೀಡುವಬಗ್ಗೆ ಪರಿಶೀಲನೆ ನಡೆಸಲಾಗುವುದು ಎಂದು ಅವರು ಹೇಳಿದರು. ಲಂಚ ಪಡೆದರೆ ಮಾತ್ರ ಭ್ರಷ್ಟಾಚಾರವಲ್ಲ. ಸ್ವಜನ ಪಕ್ಷಪಾತ , ಕೆಲಸಕಾರ್ಯಗಳಲ್ಲಿ ವಿಳಂಬ ಮಾಡುವುದು ಕೂಡ ಭ್ರಷ್ಟಾಚಾರವಾಗಿದೆ ಎಂದು ವ್ಯಾಖ್ಯಾನಿಸಿದರು.

ದಕ್ಷತೆ, ಪ್ರಾಮಾಣಿಕತೆಯಿಂದ ಕ್ರಿಯಾಶೀಲವಾಗಿ ಜನರ ಸಮಸ್ಯೆಗಳನ್ನು ಪರಿಹರಿಸಲು ಕೆಲಸ ಮಾಡಬೇಕು, ಜನರಿಗೆ ಸ್ಪಂದಿಸಬೇಕು ಎಂದು ಹೇಳಿದರು. ಸರ್ಕಾರಿ ನೌಕರರು, ಅಧಿಕಾರಿಗಳು ಚೆನ್ನಾಗಿ ಕೆಲಸ ಮಾಡಿದರೆ ಒಳ್ಳೆಯ ಹೆಸರು ಬರುತ್ತದೆ. ಜನಮುಖಿಯಾಗಿ ಕೆಲಸ ಮಾಡಿದರೆ ಮಾತ್ರ ಸರ್ಕಾರಕ್ಕೆ ಯಶಸ್ಸು ಮನ್ನಣೆ ಸಿಗುತ್ತದೆ ಎಂದರು.

ಅಂದಿನದ ಕೆಲಸವನ್ನು ಅಂದೇ ಮಾಡಬೇಕು, ಯಾವುದೇ ಕಾರಣಕ್ಕೂ ಮುಂದೂಡುವ ಕೆಲಸ ಮಾಡಬಾರದು, ಬೇರೆ ಸರ್ಕಾರಿ ನೌಕರಿ ಕೆಲಸದವರಿಗೆ ಹೋಲಿಸಿದರೆ ಸಚಿವಾಲಯದ ಅಧಿಕಾರಿಗಳು ಅದೃಷ್ಟವಂತರು. ಇವರು ಬೆಂಗಳೂರು ಬಿಟ್ಟು ಬೇರೆ ಕಡೆ ವರ್ಗಾವಣೆಯೇ ಆಗುವುದಿಲ್ಲ ಎಂದರು. ನಗರಾಭಿವೃದ್ಧಿ ಸಚಿವ ಆರ್.ರೋಷನ್ ಬೇಗ್ ಮಾತನಾಡಿ, ನಮ್ಮ ತಂದೆ ಕೂಡ ಸಚಿವಾಲಯದಲ್ಲಿ ಕಿರಿಯ ಸಹಾಯಕರಿಂದ ಉಪಕಾರ್ಯದರ್ಶಿಯವರೆಗೂ ಸೇವೆ ಸಲ್ಲಿಸಿದ್ದಾರೆ. ನಾನು 10 ವರ್ಷ ಹುಡುಗನಿಂದಲೇ ವಿಧಾನಸೌಧಕ್ಕೆ ಬರುತ್ತಿದ್ದೇನೆ ಎಂದು ಸ್ಮರಿಸಿದರು.
ನಾನು ಮೊದಲ ಬಾರಿಗೆ ಶಾಸಕನಾದಾಗ ನನ್ನ ತಂದೆಯನ್ನು ಇವರ ಮಗ ಶಾಸಕರಾಗಿದ್ದಾರೆ ಎಂದು ಗುರುತಿಸುತ್ತಿದ್ದರು ಎಂದು ಹೇಳಿದರು. ಇದೇ ಸಂದರ್ಭದಲ್ಲಿ ಸಂಘದ ಸುವರ್ಣ ಮಹೋತ್ಸವ ಭವನಕ್ಕೆ ನಿವೇಶನ ನೀಡಬೇಕು, *ಕೇಂದ್ರ ಸರ್ಕಾರಿ ನೌಕರರ ಸರಿಸಮಾನ ವೇತನ ನೀಡಬೇಕು,* ವಿಧಾನಮಂಡಲ ಅಧಿವೇಶನದ ಭತ್ಯೆ ನೀಡಬೇಕೆಂಬ ಬೇಡಿಕೆಯನ್ನು ಸಂಘದ ಪರವಾಗಿ ಸಿಎಂ ಸಿದ್ದರಾಮಯ್ಯನವರಿಗೆ ಮನವಿ ಸಲ್ಲಿಸಲಾಯಿತು. ಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ದಿ ಸಚಿವೆ ಉಮಾಶ್ರೀ , ವಿಧಾನಪರಿಷತ್ ಸದಸ್ಯ ಕೆ.ಸಿ.ಕೊಂಡಯ್ಯ, ಸಂಘದ ಅಧ್ಯಕ್ಷ ಮಹದೇವಯ್ಯ ಮಠಪತಿ, ಪ್ರಧಾನ ಕಾರ್ಯದರ್ಶಿ ಕೃಷ್ಣಮೂರ್ತಿ ಸೇರಿದಂತೆ ಮತ್ತಿತರರು ಇದ್ದರು.