pages

ಸಂಘದ ಬಗ್ಗೆ

ಸಚಿವಾಲಯ ನೌಕರ ಸಂಘ ನಡೆದು ಬಂದ ದಾರಿ.

ಸಚಿವಾಲಯ ಆಡಳಿತ ವ್ಯವಸ್ಥೆಯು ಹಳೆಯ ಮೈಸೂರು ರಾಜ್ಯದಲ್ಲಿ  ಕ್ರಿ.ಶ 1881ರಷ್ಟು ಹಿಂದೆಯೇ ಅಸ್ತಿತ್ವಕ್ಕೆ ಬಂದಿತ್ತು. ಮೈಸೂರು ಸರ್ಕಾರದ ಸಚಿವಾಲಯದಲ್ಲಿ 4 ಕಾರ್ಯದರ್ಶಿಗಳಿದ್ದು ದಿವಾನರ ಕೈಕೆಳಗೆ ಅವರು ಕಾರ್ಯನಿರ್ವಹಿಸುತ್ತಿದ್ದರು. ಅದರಲ್ಲಿ ಸಾಮಾನ್ಯ ಆಡಳಿತ ಮತ್ತು ಕಂದಾಯ ಇಲಾಖೆಗೆ ಮುಖ್ಯ ಕಾರ್ಯದರ್ಶಿಗಳು ಇದ್ದು ಲೋಕೋಪಯೋಗಿ ಇಲಾಖೆ, ಶಿಕ್ಷಣ ಇಲಾಖೆ ಹಾಗೂ ಮಹಾರಾಜರ ಸೈನ್ಯದ ಇಲಾಖೆಗಳಿಗೆ ಪ್ರತ್ಯೇಕ ಕಾರ್ಯದರ್ಶಿಗಳಿದ್ದರು.

ತದನಂತರ ಬದಲಾದ ಸಾಮಾಜಿಕ ವ್ಯವಸ್ಥೆಯ ಅಗತ್ಯಗಳಿಗೆ ಅನುಗುಣವಾಗಿ ಸಾರ್ವಜನಿಕ ಆಡಳಿತ ವ್ಯವಸ್ಥೆಯು ವಿಸ್ತರಿಸಿತು. ಸರ್ಕಾರದ ಉನ್ನತ ಆಡಳಿತ ವ್ಯವಸ್ಥೆಯಾಗಿದ್ದ ಸಚಿವಾಲಯವು ಅದಕ್ಕೆ ಅನುಗುಣವಾಗಿ ಬೆಳೆಯಿತು. 1923-24ನೇ ಸಾಲಿನ ಹೊತ್ತಿಗೆ ಮುಖ್ಯ ಕಾರ್ಯದರ್ಶಿ ಹುದ್ದೆಯನ್ನು ಜಾರಿಗೆ ತಂದು ಅವರ ಅಧೀನಕ್ಕೆ  ಎಲ್ಲಾ ಇಲಾಖೆಗಳನ್ನು ತರಲಾಯಿತು. ರಾಜ್ಯ ಪ್ರಭುತ್ವದ ಅಡಿಯಲ್ಲಿದ್ದ ಹಳೆಯ ಮೈಸೂರು ರಾಜ್ಯವು ಆ ಕಾಲದ ದಕ್ಷ ಆಡಳಿತಗಾರರಾದ ಸರ್. ಎಂ. ವಿಶ್ವೇಶ್ವರಯ್ಯ, ಶೇಷಾದ್ರಿ ಅಯ್ಯರ್, ಸರ್. ಮಿರ್ಜಾ ಇಸ್ಮಾಯಿಲ್, ಎ.ರಾಮಸ್ವಾಮಿಮೊದಲಿಯಾರ್ರವರಂತಹ ಮಾರ್ಗದರ್ಶನದಲ್ಲಿ ಮೈಸೂರು ರಾಜ್ಯವು ಆ ಕಾಲಕ್ಕೆ ಪ್ರಗತಿ ಹೊಂದಿದ ರಾಜ್ಯವಾಗಿತ್ತು.

ಆಗಿನ ಸಚಿವಾಲಯವು ಮೊದಲಿಗೆ ಮೈಸೂರಿನಲ್ಲಿ ತದನಂತರ ಬೆಂಗಳೂರಿನ ಕಅಠಾರ ಕಛೇರಿಕಿ ಎಂದು ಹೆಸರಾಗಿದ್ದ ಈಗಿನ ರಾಜ್ಯ ಹೈಕೋರ್ಟ್ ಇರುವ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿತ್ತು. ಆಧುನಿಕ ಸಾರ್ವಜನಿಕ ವ್ಯವಸ್ಥೆ ಬೆಳೆದಂತೆ ಸಚಿವಾಲಯದ ಕಾರ್ಯವ್ಯಾಪ್ತಿಯು ಸಹ ಹೆಚ್ಚಾಗತೊಡಗಿತು.  ಇದೇ ವೇಳೆಗೆ ಭಾರತಕ್ಕೆ  ಸ್ವಾತಂತ್ರ್ಯ ಬಂದು ಭಾಷಾವಾರು ಪ್ರಾಂತ್ಯಗಳ ರಚನೆಗೆ ಚಾಲನೆ ಸಿಕ್ಕಿತು. ಕನ್ನಡ ಭಾಷೆ ಮಾತನಾಡುವ ಅನೇಕ ಭಾಗಗಳು ವಿವಿಧ ಪ್ರಾಂತ್ಯಗಳಲ್ಲಿ ಹರಿದು ಹಂಚಿಹೋಗಿದ್ದವು. ಹೀಗಾಗಿ ಕನ್ನಡ ಮಾತನಾಡುವ ಎಲ್ಲಾ ಪ್ರದೇಶಗಳನ್ನು ಒಂದೇ ರಾಜ್ಯದ ವ್ಯಾಪ್ತಿಗೆ ತರಲು ಕಎಸ್. ನಿಜಲಿಂಗಪ್ಪಕಿನವರ ಮುಂದಾಳತ್ವದಲ್ಲಿ ಕರ್ನಾಟಕ ಏಕೀಕರಣ ಚಳುವಳಿ ತೀವ್ರವಾಗಿ ನಡೆದು ವಿಶಾಲ ಮೈಸೂರು ರಾಜ್ಯದ ರಚನೆಯಾಯಿತು. ಆಗಿನ ಹಳೆಯ ಮೈಸೂರು ರಾಜ್ಯ ಮುಖ್ಯಮಂತ್ರಿಯಾಗಿದ್ದ ಕಕೆಂಗಲ್ ಹನುಮಂತಯ್ಯಕಿನವರ ಅವಧಿಯಲ್ಲಿ 1956ಕ್ಕೆ ಸಚಿವಾಲಯವು ವಿಧಾನಸೌಧದಲ್ಲಿ ನೆಲೆಗೊಂಡಿತು.

ಹಳೆಯ ಮೈಸೂರು ರಾಜ್ಯದಲ್ಲಿ ಸಚಿವಾಲಯ ವ್ಯವಸ್ಥೆಯು 1881ರಷ್ಟು ಹಿಂದೆಯೇ ಅಸ್ತಿತ್ವಕ್ಕೆ ಬಂದಿದ್ದರೂ ಸಹ ಸಚಿವಾಲಯ ನೌಕರರ ಪ್ರಜಾಸತ್ತಾತ್ಮಕ ಹಕ್ಕುಗಳ ರಕ್ಷಣೆ, ಅವರ ಸೇವಾ ಸ್ಥಿತಿಗಳ ಸುಧಾರಣೆ ಹಾಗೂ ನಂದಿನ ಕುಂದುಕೊರತೆಗಳನ್ನು ಸರ್ಕಾರದ ಮುಂದೆ ಪ್ರತಿಪಾದಿಸಲು ತಮ್ಮದೇ ಆದ ಒಂದು ಸಂಘಟನೆ 1947ರವರೆಗೆ  ಸಚಿವಾಲಯದಲ್ಲಿ ಇರಲಿಲ್ಲ. ಅದೇ ಕಾಲಕ್ಕೆ ಸರ್ಕಾರಿ ನೌಕರರ ವೇತನ ಪರಿಷ್ಕರಣೆಗೆ ಸರ್ಕಾರವು 1947ರಲ್ಲಿ ಆದೇಶಿಸಿತ್ತು. ಇಂತಹ ಸನ್ನಿವೇಶದಲ್ಲಿ ಸಚಿವಾಲಯದ ಅಧಿಕಾರಿ/ನೌಕರರ ಹಿತಾಸಕ್ತಿಗಳಿಗೆ ಸಂಬಂಧಿಸಿದಂತೆ ಸಲಹೆ ಸೂಚನೆಗಳನ್ನು ಸಲ್ಲಿಸಲು ತಮ್ಮದೇ ಆದ ಒಂದು ಸಂವಿಲ್ಲದಿರುವುದನ್ನು ಮನಗಂಡ ಅಂದಿನ ಅಧಿಕಾರಿ/ನೌಕರರು 1947ರ ಮಾರ್ಚಿ ತಿಂಗಳಲ್ಲಿ ಖಮೈಸೂರು ಸರ್ಕಾರದ ಸಚಿವಾಲಯ ನೌಕರರ ಸಂಘವನ್ನು (MGS Employees Association) ಸ್ಥಾಪಿಸಿದರು.  ಸದರಿ ಸಂವು 1949ರಲ್ಲಿ ಕಾನೂನಿನ ರೀತಿಯಲ್ಲಿ ನೊಂದಣಿಯಾಗಿ ಇಂದಿಗೆ 67 ವರ್ಷಗಳನ್ನು ಪೂರೈಸಿದೆ. ಜನವರಿ 1957ರಲ್ಲಿ ಈ ಸಂಘವು ಸರ್ಕಾರದ ಮಾನ್ಯತೆಯನ್ನು ಪಡೆದಿರುತ್ತದೆ.

ಮೈಸೂರು ಸರ್ಕಾರದ ಸಚಿವಾಲಯ ನೌಕರರ ಸಂಘವು 1973ರಿಂದ ಕರ್ನಾಟಕ ಸರ್ಕಾರದ ಸಚಿವಾಲಯ ಸಂಘವಾಗಿ ಮನ್ನಣೆ ಪಡೆದಿದ್ದುಪ್ರಸ್ತುತ  ಕರ್ನಾಟಕ ಸರ್ಕಾರ ಸಚಿವಾಲಯ ನೌಕರರ ಸಂಘವಾಗಿ ಕಾರ್ಯ ನಿರ್ವಹಿಸುತ್ತಿದೆ. ಸಚಿವಾಲಯದ ಗ್ರೂಪ್-ಡಿ ವೃಂದದ ನೌಕರರಿಂದ ಹಿಡಿದು ಅಪರ ಕಾರ್ಯದರ್ಶಿ ಹಂತದ ಅಧಿಕಾರಿಗಳ ಪ್ರಜಾಸತ್ತಾತ್ಮಕ ಹಕ್ಕುಗಳ ರಕ್ಷಣೆಗಾಗಿ ಈ ಸಂವು ನಿರಂತರವಾಗಿ ಕಾರ್ಯನಿರ್ವಹಿಸುತ್ತಾ ಬಂದಿದೆ. ನೌಕರರ ನ್ಯಾಯಯುತ ಹಕ್ಕುಗಳಿಗಾಗಿ ಅನೇಕ ಹೋರಾಟಗಳನ್ನು ನಡೆಸಿ ನ್ಯಾಯ ದೊರಕಿಸಿಕೊಟ್ಟಿದೆ.  ನೌಕರರ ಶ್ರೇಯೋಭಿವೃದ್ಧಿಗಾಗಿ ಸಕ್ರಿಯವಾಗಿ ಕಾರ್ಯನಿರ್ವಹಿಸಿಕೊಂಡು ಬಂದಿರುವುದರ ಜೊತೆಗೆ ಸಚಿವಾಲಯ ಸೇವೆಯ ಘನತೆ ಗೌರವಗಳನ್ನು ಎತ್ತಿ ಹಿಡಿಯಲು ನಿರಂತರವಾಗಿ ಶ್ರಮಿಸುತ್ತಿದೆ.

ಕರ್ನಾಟಕ ಸರ್ಕಾರ ಸಚಿವಾಲಯ ನೌಕರರ ಸಂಘಕ್ಕೆ ತನ್ನದೇ ಆದ ಇತಿಹಾಸವಿದೆ. ಮೈಸೂರು ಸರ್ಕಾರದ ಸಚಿವಾಲಯ ನೌಕರರ ಸಂಘದ ಮೊದಲ ಅಧ್ಯಕ್ಷರಾಗಿ ಶ್ರೀ ಹೊನ್ನಪ್ಪ, ನಂತರ ಶ್ರೀ ಖಾದಿರ್ ಮೊಹಿದ್ದೀನ್, ಶ್ರೀ ಎ.ಪಿ. ಮಾಸಲಾಮಣಿ, ಶ್ರೀ ಸಯ್ಯದ್ ಬಷೀರ್, ಶ್ರೀ ಕೆ. ಕರುಣಾಕರ ಶೆಟ್ಟಿ ಹಾಗೂ ಈಗಿನ ಅಧ್ಯಕ್ಷರಾದ ಶ್ರೀ ಮಹದೇವಯ್ಯ ಮಠಪತಿ ಇವರೆಲ್ಲ ಈ ಸಂಘವನ್ನು ಸಮರ್ಥವಾಗಿ ಮುನ್ನೆಡೆಸಿರುತ್ತಾರೆ.

ರಾಜ್ಯ ಸರ್ಕಾರಿ ಆಡಳಿತದ ವ್ಯವಸ್ಥೆಯಲ್ಲಿ ಸಚಿವಾಲಯವು ಉನ್ನತ ಸ್ಥಾನವನ್ನು ಹೊಂದಿದ್ದುಅದರ ನತೆಯನ್ನು ಎತ್ತಿ ಹಿಡಿಯಲು ಸಚಿವಾಲಯ ನೌಕರರ ಸಂಘವು ನಿರಂತರವಾಗಿ ಶ್ರಮಿಸುತ್ತಾ ಬಂದಿದೆ. ಕರ್ನಾಟಕ ಸರ್ಕಾರ ಸಚಿವಾಲಯ ನೌಕರರ ಸಂಘಕ್ಕೆ ರಾಜ್ಯ ಸರ್ಕಾರಿ ನೌಕರರ ಸಂಘಟನೆಗಳಲ್ಲಿ ತನ್ನದೇ ಆದ ವಿಶಿಷ್ಠ ಸ್ಥಾನವಿದೆ.

ರಾಜ್ಯ ಮಟ್ಟದಲ್ಲಿ  ’ಸಿ’ ಮತ್ತು ’ಡಿ’ ವರ್ಗದ ನೌಕರರ ಪ್ರಾತಿನಿಧ್ಯದ ಎನ್.ಜಿ.ಒ ಸಂಘಟನೆ ಅಸ್ತಿತ್ವದಲ್ಲಿತ್ತು. ಈ ಎನ್.ಜಿ.ಒ ಸಂಘಟನೆಗೂ ಸಹ ಸಚಿವಾಲಯದ ನೌಕರರಾದ ಬಿ. ಚನ್ನಬಸಪ್ಪ, ನಾಗೇಶ್ವರರಾವ್, ಎ.ಪಿ.ಮಾಸಲಾಮಣಿ, ಮೇರಿ ದೇವಾಸಿಯಾ, ಖಾದರ್ ಮೊಹಿದ್ದೀನ್, ಸೈಯ್ಯದ್ ಬಷೀರ್ ಅಹಮದ್ ಇವರುಗಳು ಪದಾಧಿಕಾರಿಗಳಾಗಿದ್ದರು.  ಇವರಲ್ಲಿ ಮೇರಿ ದೇವಾಸಿಯಾರವರು ಎನ್.ಜಿ.ಒ ಸಂಘದ ಜಂಟಿ ಕಾರ್ಯದರ್ಶಿಯಾಗಿ, ಪ್ರಧಾನ ಕಾರ್ಯದರ್ಶಿಯಾಗಿ, ತದನಂತರ ಅಧ್ಯಕ್ಷರಾಗಿ ಸಲ್ಲಿಸಿದ ಸೇವೆ ಅವಿಸ್ಮರಣೀಯವಾದುದು. ಮೇರಿ ದೇವಾಸಿಯಾರವರು ಸಂಘಕ್ಕೆ ಹೊಸ ಚೈತನ್ಯವನ್ನು ತುಂಬಿ ರಾಜ್ಯದಾದ್ಯಂತ ನೌಕರರನ್ನು ಸಂಘಟನೆ ಮಾಡಿ ನೌಕರರ ಜ್ವಲಂತ ಬೇಡಿಕೆಗಳನ್ನು ಸರ್ಕಾರದ ಮುಂದಿಟ್ಟು ಧೀರೋದಾತ್ತವಾದ ಹೋರಾಟಗಳನ್ನು ನಡೆಸಿದರು. ಅವರ ಹೋರಾಟದ ಫಲವಾಗಿ ಸರ್ಕಾರಿ ನೌಕರರು ಕೇಂದ್ರ ಸರ್ಕಾರಿ ನೌಕರರಿಗೆ ಸಮನಾದ ತುಟ್ಟಿಭತ್ಯೆ, ಮೊದಲನೇ ವೇತನ ಆಯೋಗದ ಲಾಭಗಳನ್ನು ಪಡೆಯಲು ಸಾಧ್ಯವಾಯಿತು. ಆದರೆ ಅಂದಿನ ಸರ್ಕಾರ ಮೇರಿ ದೇವಾಸಿಯಾರವರನ್ನು ಸರ್ಕಾರದ ಸೇವೆಯಿಂದ ವಜಾಗೊಳಿಸಿತು. ಈ ಹಿನ್ನೆಲೆಯಲ್ಲಿ ಸಚಿವಾಲಯದಲ್ಲಿ ಅಧಿಕಾರಿ/ನೌಕರರು ಸಂಘಟನೆಗಳಲ್ಲಿ ಪಾಲ್ಗೊಳ್ಳುವ ಉತ್ಸಾಹ ಕಡಿಮೆಯಾಯಿತು. ನೌಕರರ ಮುಂದಾಳುಗಳು ಶಾಖೆಗಳಿಗೆ ಬಂದರೆ ತಲೆಯೆತ್ತಿ ಸಹ ನೋಡದ ವಾತಾವರಣವಿತ್ತು. ಮೆರಿ ದೇವಾಸಿಯಾರವರ ನಂತರ ಎನ್.ಜಿ.ಒ ಸಂಘಟನೆಗೆ ಕೆ.ಎ. ಕೇಶವಮೂರ್ತಿರವರು ಅಧ್ಯಕ್ಷರಾಗಿ, ರಾವನ್ರವರು ಕಾರ್ಯದರ್ಶಿಯಾಗಿ, ಸೈಯ್ಯದ್ ಬಷೀರ್ ಅಹಮದ್ರವರು ಖಜಾಂಚಿಯಾಗಿ ಆಯ್ಕೆಯಾದರು. ಈ ಮುಖಂಡರು ನೌಕರರ ಬೇಡಿಕೆಗಳ ಈಡೇರಿಕೆಗೆ ಹೋರಾಟಗಳಿಗೆ ಕರೆಕೊಟ್ಟಾಗ ಸಚಿವಾಲಯದ ಅಧಿಕಾರಿ ನೌಕರರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುತ್ತಿರಲಿಲ್ಲ. ಈ ಸನ್ನಿವೇಶದಲ್ಲಿ ಎಲ್ಲಾ ವೃಂದಗಳಿಂದ ಪ್ರತಿನಿಧಿಗಳು ಚುನಾಯಿತರಾಗುವಂತೆ ನಿಯಮಾವಳಿಗಳಲ್ಲಿ ಅವಕಾಶ ಕಲ್ಪಿಸಿದ ಮೇಲೆ ಸಂಘದ  ಉಪನಿಯಮಾವಳಿಗಳು ಹೆಚ್ಚು ಪ್ರಜಾಸತ್ತಾತ್ಮಕವಾಯಿತು. ಎಲ್ಲಾ ವರ್ಗದ ಅಧಿಕಾರಿ/ನೌಕರರು ಸಂಘದಲ್ಲಿ ಪ್ರಾತಿನಿಧ್ಯ ಪಡೆದಿದ್ದರಿಂದ ಸಚಿವಾಲಯ ಸಂಟನೆಗೆ ಹೆಚ್ಚಿನ ಬಲ ಬಂದಿತು.

ಕ್ರಮೇಣವಾಗಿ ಅಧಿಕಾರಿ/ನೌಕರರುಗಳನ್ನು ಹೋರಾಟಗಳಲ್ಲಿ ಮುಂಚೂಣಿಗೆ ತರುವಲ್ಲಿ ಹೆಚ್ಚು ಯಶಸ್ವಿಯಾಗಿದ್ದು ಮಹದೇವಯ್ಯ ಮಠಪತಿಯವರು ಸಚಿವಾಲಯ ನೌಕರ ಸಂಘದ ಅಧ್ಯಕ್ಷರಾದ ನಂತರ. ಈ ಅವಧಿಯಲ್ಲಿ ಅವರಿಗೆ ಸಂಘದ ಪ್ರಧಾನ ಕಾರ್ಯದಶಿಯಾಗಿ ಎಸ್.ಎಸ್. ಹದ್ಲಿ ಹಾಗೂ ಜಿ.ಎಲ್. ಮಡಿವಾಳ್, ಎಸ್. ರೇಣುಕಾರಾಧ್ಯ ಯು.ಡಿ. ನರಸಿಂಹಯ್ಯ, ಟಿ.ಬಿ. ಬೆಳಗಾವಿ, ಸಿದ್ಧಗಂಗಯ್ಯ ಮುಂತಾದವರು ಸಮರ್ಥವಾದ ಬೆಂಬಲವನ್ನು ನೀಡಿದರು. ಸಚಿವಾಲಯದಲ್ಲಿ ಕಿರಿಯ ಸಹಾಯಕರ ಸಂಘ, ಸಹಾಯಕರ ಸಂಘ  ಮತ್ತಿತರ ವೃಂದ ಸಂಘಗಳು ಹೆಚ್ಚು ಬಲಗೊಂಡಿದ್ದರ ಪರಿಣಾಮವಾಗಿ ಸಚಿವಾಲಯ ನೌಕರರ ಸಂಘವು ಮತ್ತಷ್ಟು ಪ್ರಬಲವಾಯಿತು ಹಾಗೂ ಸಚಿವಾಲಯದ ಅಧಿಕಾರಿ/ನೌಕರರ ಸೇವಾ ಹಿತರಕ್ಷಣೆಗಾಗಿ ಹಲವಾರು ಹೋರಾಟಗಳನ್ನು ಯಶಸ್ವಿಯಾಗಿ ನಡೆಸಿಕೊಂಡು ಬರಲು ಸಾಧ್ಯವಾಯಿತು. ಇಂದು ಸಚಿವಾಲಯ ನೌಕರರ ಸಂಘವು ರಾಜ್ಯ ಸರ್ಕಾರಿ ನೌಕರರ ಹೋರಾಟಗಳಲ್ಲಿ ಮುಂಚೂಣಿಯಲ್ಲಿದೆ.

1983 ರಲ್ಲಿ ಸಚಿವಾಲಯ ನೌಕರರ ಸಂಘಕ್ಕೆ ನಡೆದ ಚುನಾವಣೆಯಲ್ಲಿ ಮಹದೇವಯ್ಯ ಮಠಪತಿಯವರು ಆಯ್ಕೆಯಾದಾಗ ಅವರು ಕಿರಿಯ ಸಹಾಯಕರಾಗಿ ಸೇವೆ ಸಲ್ಲಿಸುತ್ತಿದ್ದು, ಕಿರಿಯ ಸಹಾಯಕರೊಬ್ಬರು ಇದೇ ಪ್ರಥಮ ಬಾರಿಗೆ ಅಧ್ಯಕ್ಷರಾಗಿದ್ದು ಸಂಘದ ಇತಿಹಾಸವಾಯಿತು. ಈ ಅವಧಿಯಲ್ಲಿ ಸಮಸ್ಯೆಗಳಿದ್ದಾಗ ಮುಖ್ಯ ಕಾರ್ಯದರ್ಶಿಯವರನ್ನು ಸೇರಿದಂತೆ ಹಲವು ಹಿರಿಯ ಅಧಿಕಾರಿಗಳನ್ನು ಭೇಟಿ ಮಾಡಿ ಸಮಸ್ಯೆಗಳಿಗೆ ಪರಿಹಾರ ಒದಗಿಸುವುದು, ನಿವೃತ್ತ ಅಧಿಕಾರಿ ನೌಕರರಿಗೆ ಆತ್ಮೀಯ ಬೀಳ್ಕೊಡುಗೆ ಸನ್ಮಾನ ನಡೆಸುವುದು, ಅಗತ್ಯಬಿದ್ದಾಗ ಸಭೆ ನಡೆಸಿ ನೌಕರರಲ್ಲಿ ಜಾಗೃತಿ ಮೂಡಿಸುವುದು, ಯಾವುದೇ ವೃಂದದಲ್ಲೂ ಹುದ್ದೆಗಳು ಖಾಲಿಯಾದಾ ಸಂಘದ ನಿರಂತರ ಹೋರಾಟದ ಫಲಶ್ರುತಿಯಾಗಿ ಹುದ್ದೆಗಳು ಭರ್ತಿಯಾಗುತ್ತಿದ್ದವು. ಇದರಿಂದಾಗಿ ಸಚಿವಾಲಯದ ನೌಕರರಿಗೆ ಸಂಘದ ಮೇಲಿನ ವಿಶ್ವಾಸವು ಮತ್ತಷ್ಟು ಹೆಚ್ಚಲು ಸಾಧ್ಯವಾಯಿತು.

1988ರ ಚುನಾವಣೆಯಲ್ಲಿಯೂ ಮಹದೇವಯ್ಯ ಮಠಪತಿಯವರು ಅಧ್ಯಕ್ಷರಾಗಿಯೂ, ಎಸ್.ಎಸ್. ಹದ್ಲಿ ಇವರು ಪ್ರಧಾನ ಕಾರ್ಯದರ್ಶಿಯಾಗಿ ಮುಂದುವರೆದು ನೌಕರ ಪರವಾದ ಅನೇಕ ಹೋರಾಟಗಳನ್ನು ನಡೆಸಿ, ರಚನಾತ್ಮಕ ಕಾರ್ಯಗಳಿಂದ ಸಂಘವನ್ನು ಮತ್ತೆ ಮುನ್ನಡೆಸಿದರು.

1990 ರಲ್ಲಿ ಸಂಘಕ್ಕೆ  ಚುನಾವಣೆ ನಡೆಯಿತು. ನಂತರ ನಾಗರತ್ನಮ್ಮರವರು ಅಧ್ಯಕ್ಷರಾಗಿಯೂ ಹಾಗೂ ಎಂ.ಸಿ. ಪೂಣಚ್ಚರವರು ಪ್ರಧಾನ ಕಾರ್ಯದರ್ಶಿಯಾಗಿಯೂ ಆಯ್ಕೆಯಾದರು. ಈ ಅವಧಿಯಲ್ಲಿ ಸರ್ಕಾರವು ಸಹಾಯಕರು ಮತ್ತು ಶೀಘ್ರಲಿಪಿಗಾರರ ನಡುವೆ ಹಿರಿಯ ಸಹಾಯಕರ ವೃಂದಕ್ಕೆ ಬಡ್ತಿ ನೀಡುತ್ತಿದ್ದ ಪದ್ಧತಿಯನ್ನು ಪರಿಶೀಲನೆ ಮಾಡದೆ ಅನುಪಾತವನ್ನು ಶೀಫ್ರಲಿಪಿಗಾರರ ಪರವಾಗಿ ಹೆಚ್ಚಿಸಿ, ಪ್ರಸ್ತಾವನೆಯನ್ನು ಸಚಿವ ಸಂಪುಟದ ಒಪ್ಪಿಗೆ ಪಡೆದ ಸಂಘದರ್ಭದಲ್ಲಿ ಸಚಿವಾಲಯದ ನೌಕರರು ಮುಖ್ಯ ಕಾರ್ಯದರ್ಶಿಯವರ ಕಚೇರಿ ಮುಂದೆ ಧರಣಿ ಕುಳಿತರು. ಅಂದಿನ ಮುಖ್ಯಮಂತ್ರಿಗಳಾಗಿದ್ದ ಶ್ರೀ ಎಸ್. ಬಂಗಾರಪ್ಪನವರ ಸರ್ಕಾರ ನೌಕರರ ಬೇಡಿಕೆಗಳಿಗೆ ಮಣಿಯದಿದ್ದಾಗ, ಸಚಿವಾಲಯದ ನೂರಾರು ಅಧಿಕಾರಿ/ನೌಕರರು ಬಹುಮಹಡಿ ಕಟ್ಟಡದ ಮುಂದಿನ ಉದ್ಯಾನವನದಲ್ಲಿ ನಿರಂತರವಾಗಿ 10 ದಿನಗಳ ಕಾಲ ಮುಷ್ಕರವನ್ನು ಯಶಸ್ವಿಯಾಗಿ ನಡೆಸಿದರು. ಮಹಿಳಾ ನೌಕರರನ್ನು ಒಳಗೊಂಡಂತೆ ಹಲವರನ್ನು ಪೊಲೀಸರು ಬಂಧಿಸಿ ಕರೆದೊಯ್ದರು. ಆ ಸಂದರ್ಭದಲ್ಲಿ ಬೃಹತ್ ಮೆರವಣಿಗೆಯ ಮೂಲಕ ರಾಜ್ಯಪಾಲರ ಕಛೇರಿಗೆ ತೆರಳಿ ಮನವಿ ಸಲ್ಲಿಸಲಾಗಿತ್ತು. ಈ ಎಲ್ಲಾ ಹೋರಾಟಗಳ ಹಿನ್ನೆಲೆಯಲ್ಲಿ ಅಂದಿನ ಮುಖ್ಯಮಂತ್ರಿಗಳಾದ  ಶ್ರೀ ಎಸ್. ಬಂಗಾರಪ್ಪನವರು ತುರ್ತು ಸಚಿವ ಸಂಪುಟದ ಸಭೆ ಕರೆದು ಈ ಹಿಂದೆ ಹೊರಡಿಸಿದ ಆದೇಶವನ್ನು ಹಿಂಪಡೆದು ಶೀಘ್ರಲಿಪಿಗಾರರ ಮತ್ತು ಸಹಾಯಕರ ಅನುಪಾತ ಪದ್ಧತಿಯನ್ನು ಮತ್ತೆ ಮೊದಲಿನಂತೆಯೇ ಇರಬೇಕೆಂದು ಆದೇಶಿಸಿದರು.

1992ರ ನಂತರದ ಚುನಾವಣೆಯಲ್ಲಿ ಕಾಂ|| ಮಹದೇವಯ್ಯ ಮಠಪತಿಯವರು ಮತ್ತೆ ಅಧ್ಯಕ್ಷರಾಗಿ ಕಾಂ|| ಎಸ್.ಎಸ್. ಹದ್ಲಿಯವರು ಪ್ರಧಾನ ಕಾರ್ಯದರ್ಶಿಯವರಾಗಿ ಆಯ್ಕೆಯಾಗಿದ್ದರು. ಈ ಸಂದರ್ಭದಲ್ಲಿ ಶೀಘ್ರಲಿಪಿಗಾರರಿಗೆ ಅವರದೇ ವೃಂದದಲ್ಲಿ ಬಡ್ತಿ ಅವಕಾಶವನ್ನು ಸರ್ಕಾರ ಕಲ್ಪಿಸಿತು. ಅವರದೇ ಆದ ವೃಂದದ ಆಯ್ಕೆಗೆ ಅವಕಾಶವನ್ನು ಕಲ್ಪಿಸಿತು. ಸಚಿವಾಲಯದ ನೌಕರರ ಹಿತಕ್ಕಾಗಿ ಹಲವಾರು ರಚನಾತ್ಮಕ ಕಾರ್ಯಕ್ರಮಗಳನ್ನು ಸಂಘವು ಹಮ್ಮಿಕೊಂಡಿತು. ಅದರಲ್ಲಿ ಮುಖ್ಯವಾಗಿ ಸಚಿವಾಲಯ ಉಪಹಾರ ಮಂದಿರವನ್ನು ನವೀಕರಣಗೊಳಿಸಿ 3 ವರ್ಷಗಳ ಕಾಲ ಉಪಾಹಾರ ಮಂದಿರವನ್ನು ಸಂಘದ ಉಪಸಮಿತಿಯ ಮೂಲಕ ಯಶಸ್ವಿಯಾಗಿ ನಡೆಸಿಕೊಂಡು ಬರಲಾಯಿತು. ಕೇವಲ 7/- ರೂಪಾಯಿಗಳಿಗೆ ಮಧ್ಯಾಹ್ನದ ಊಟವನ್ನು ಒದಗಿಸಲಾಗುತ್ತಿತ್ತು. ಅದೇ ರೀತಿ ಸಚಿವಾಲಯ ನೌಕರರು ಮತ್ತು ಸುತ್ತಮುತ್ತಲಿನ ಕಚೇರಿಗಳ ನೌಕರರ ಮಕ್ಕಳ ಅನುಕೂಲಕ್ಕಾಗಿ ಎಂ.ಎಸ್.ಐ.ಎಲ್ ಸಂಸ್ಥೆಯ ಲೇಖಕ್ ಪುಸ್ತಕಗಳ ಮಾರಾಟವನ್ನು 4 ವರ್ಷಗಳ ಕಾಲ ನಿರಂತರವಾಗಿ ನಡೆಸಿಕೊಂಡು ಬರಲಾಯಿತು. ಇದರಲ್ಲಿ ಬಂದ ಸಣ್ಣ ಪ್ರಮಾಣದ ಲಾಭಾಂಶವನ್ನು ಸಚಿವಾಲಯ ಸಹಕಾರ ಸಂಘದಲ್ಲಿ 3.00 ಲಕ್ಷ ರೂಪಾಯಿಗಳ ನಿಶ್ಚಿತ ಠೇವಣಿಯಾಗಿರಿಸಲಾಯಿತು. ಅದರಿಂದ ಬರುವ ಬಡ್ಡಿಯ ಹಣದಲ್ಲಿ ಸಚಿವಾಲಯದಲ್ಲಿ ಪ್ರತಿ ತಿಂಗಳು ನಿವೃತ್ತರಾಗುವ ಅಧಿಕಾರಿ/ನೌಕರರಿಗೆ ಸಂಘದ ವತಿಯಿಂದ ಬೀಳ್ಕೊಡುಗೆ ಸಮಾರಂಭಗಳನ್ನು ಆಯೋಜಿಸಿಕೊಂಡು ಬರಲಾಗುತ್ತಿದ್ದು, ಇಂದಿನ ದಿನದವರೆಗೂ ಆ ಪದ್ಧತಿಯನ್ನು ಮುಂದುವರೆಸಿಕೊಂಡು ಬರಲಾಗುತ್ತಿದೆ.

2000 ರಲ್ಲಿ ಸಂಘದ ಸುವರ್ಣ ಮಹೋತ್ಸವವನ್ನು ಅತ್ಯಂತ ಅರ್ಥಪೂರ್ಣವಾಗಿ ಆಚರಿಸಲಾಯಿತು. ಆ ಸಂಘದರ್ಭದಲ್ಲಿ ಸಚಿವಾಲಯ ವ್ಯವಸ್ಥೆಯ ಬಗ್ಗೆ ರಾಷ್ಟ್ರೀಯ ವಿಚಾರ ಸಂಕಿರಣವನ್ನು ಏರ್ಪಡಿಸಲಾಗಿತ್ತು. ಅಂದಿನ ರಾಜ್ಯಪಾಲರಾಗಿದ್ದ ಶ್ರೀಮತಿ ವಿ.ಎಸ್. ರಮಾದೇವಿಯವರು ವಿಚಾರ ಸಂಕಿರಣವನ್ನು ಉದ್ಾಟಿಸಿದ್ದರು. ನಿವೃತ್ತ ಮುಖ್ಯ ಕಾರ್ಯದರ್ಶಿಗಳಾಗಿದ್ದ ಶ್ರೀ ಜೆ.ಸಿ.ಲಿನ್ ಹಾಗೂ ಬಾಬು ಮ್ಯಾಥ್ಯೂ ಇವರುಗಳು ಪ್ರಬಂಧಗಳನ್ನು ಮಂಡಿಸಿದ್ದರು. ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮವನ್ನು ಕೂಡ ಏರ್ಪಡಿಸಲಾಗಿತ್ತು. ಈ ಸಮ್ಮೇಳನಕ್ಕೆ ಕೇರಳ, ಆಂದ್ರಪ್ರದೇಶ, ತಮಿಳುನಾಡು, ಗೋವಾ ರಾಜ್ಯಗಳ ಸಚಿವಾಲಯಗಳ ಪ್ರತಿನಿಧಿಗಳು ಪಾಲ್ಗೊಂಡಿದ್ದರು. 2 ದಿನಗಳ ಕಾಲ ನಡೆದ ಆ ಸಮಾರಂಭದಲ್ಲಿ ಸಚಿವಾಲಯದ ಸಮಸ್ತ ಅಧಿಕಾರಿ/ನೌಕರರು ಪಾಲ್ಗೊಂಡಿದ್ದರು.

ಅನೇಕ ಸ್ಥಿತ್ಯಂತರವನ್ನು ಕಂಡ ಸಚಿವಾಲಯ ನೌಕರರ ಸಂಘದಲ್ಲಿ ಅನಿರೀಕ್ಷಿತ ಬದಲಾವಣೆಗಳಾದವು. ಸುಮಾರು ಏಳು ವರ್ಷಗಳ ನಂತರ ಮತ್ತೆ ಚುನಾವಣೆ ನಡೆಯಿತು. ಮಹದೇವಯ್ಯ ಮಠಪತಿಯವರು ಅಧ್ಯಕ್ಷರಾಗಿ, ಬಿ.ಸಿ. ವಿಜಯಕುಮಾರ್ ವರು ಉಪಾಧ್ಯಕ್ಷರಾಗಿ ಶ್ರೀಮತಿ ಬಿ.ಜಿ. ಶ್ಯಾಮಲರವರು ಪ್ರಧಾನ ಕಾರ್ಯದರ್ಶಿಯಾಗಿ ನೇಮಕವಾದರು. ನೂತನ ಪದಾಧಿಕಾರಿಗಳ ಅವಿರತ ಶ್ರಮದಿಂದ ಸಂಘವು ಹೊಸ ದಿಕ್ಕಿನತ್ತ ಸಾಗಿತು.

ದಿನಾಂಕ 14.05.2010ರಂದು ಸಂಘದ ನವೀಕೃತ ಕೊಠಡಿಯನ್ನು ಉದ್ಾಟಿಸಲಾಯಿತು. ಸಂಘ ದಿಂದ ಪ್ರಗತಿಪರವಾದ ಹೋರಾಟಗಳು ಒಂದೊಂದಾಗಿ ಆರಂಭವಾದವು. ಎನ್.ಪಿ.ಎಸ್ ರದ್ಧತಿಗಾಗಿ ಹೋರಾಟಮನೆ ಬಾಡಿಗೆ ಭತ್ಯೆ ಹೆಚ್ಚಳಕ್ಕಾಗಿ, ಅಧಿಕಾರಿ/ನೌಕರರ ಮೇಲೆ ನಡೆಯುತ್ತಿರುವ ದೌರ್ಜನ್ಯಗಳನ್ನು ವಿರೋಧಿಸಿ, ಕೇಂದ್ರ ಸರ್ಕಾರಿ ನೌಕರರ ಸಮಾನ ವೇತನಕ್ಕಾಗಿ ಆಗ್ರಹಿಸಿ ಅನೇಕ ನೌಕರ ಪರವಾದ ಹೋರಾಟಗಳನ್ನು ನಡೆಸುವ ಮೂಲಕ ನೌಕರರಿಗೆ ಪೂರಕವಾಗುವ ಕರ್ತವ್ಯವನ್ನು ನಿರ್ವಹಿಸಿತು. ಈ ಅವಧಿಯಲ್ಲಿ ಸಚಿವಾಲಯದಲ್ಲಿ ನೌಕರರ ಬಡ್ತಿ ಸೌಲಭ್ಯಗಳು ಸರಾಗವಾಗಿ ದೊರೆಯುವಂತೆ ಸಂಘವು ಕೆಲಸ ನಿರ್ವಹಿಸಿದೆ. ಬೀಳ್ಕೊಡುಗೆ ಸಮಾರಂಭಗಳನ್ನು ಪ್ರತಿ ತಿಂಗಳೂ ನಡೆಸಿಕೊಡಲಾಗುತ್ತಿದ್ದು ಇದುವರೆವಿಗೂ ಸುಮಾರು 1130ಕ್ಕೂ ಅಧಿಕಾರಿ/ನೌಕರರನ್ನು ಸಂಘದ ವತಿಯಿಂದ ಸನ್ಮಾನಿಸಲಾಗಿದೆ. ವೈದ್ಯಕೀಯ ತಪಾಸಣಾ ಶಿಬಿರಗಳು, ರಕ್ತದಾನ ಶಿಬಿರ, ಮಹಿಳಾ ದಿನಾಚರಣೆ, ಕಾರ್ಮಿಕ ದಿನಾಚರಣೆಗಳನ್ನು ಏರ್ಪಡಿಲಾಗಿದೆ. ರಾಷ್ಟ್ರೀಯ ಅಂಧತ್ವ ನಿವಾರಣಾ ಪಾಕ್ಷಿಕದ ಅಂಗವಾಗಿ ನಡೆಸಿದ ನೇತ್ರ ತಪಾಸಣಾ ಶಿಬಿರದಲ್ಲಿ ಸಚಿವಾಲಯದ ಸುಮಾರು 800ಕ್ಕೂ ಹೆಚ್ಚು ಸಿಬ್ಬಂದಿಗಳು ನೇತ್ರದಾನ ಮಾಡುವ ಪ್ರತಿಜ್ಞೆಯನ್ನು ಕೈಗೊಂಡಿದ್ದಾರೆ. ವಾರ್ಷಿಕ ಕ್ರೀಡಾ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳನ್ನು ಏರ್ಪಡಿಸಲಾಗಿದ್ದು, ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಣಾ ಕಾರ್ಯಕ್ರಮಗಳನ್ನು ಆಯಾ ಕ್ಷೇತ್ರಗಳ ಹೆಸರಾಂತ ವ್ಯಕ್ತಿಗಳನ್ನು ಅಹ್ವಾನಿಸಿ ನಡೆಸಿಕೊಂಡು ಬರಲಾಗುತ್ತಿದೆ. ದೆಹಲಿಯಲ್ಲಿ ನಡೆದ ಪಾರ್ಲಿಮೆಂಟ್ಕಿ ಚಲೋ ಕಾರ್ಯಕ್ರಮದಲ್ಲಿ ಸಚಿವಾಲಯದ ಸುಮಾರು 70-80 ಅಧಿಕಾರಿ/ನೌಕರರು ಎರಡು ಬಾರಿ ಭಾಗವಹಿಸಿ ಹೊಸ ಪಿಂಚಣಿ ಯೋಜನೆಯನ್ನು ವಿರೋಧಿಸಿರುತ್ತಾರೆ.  ಹೊರ ರಾಜ್ಯದ ಸಂಪನ್ಮೂಲ ವ್ಯಕ್ತಿಗಳನ್ನು ಆಹ್ವಾನಿಸಿ,        ನ್ಯೂ ಪೆನ್ಶನ್ ವಿರೋಧಿಸುವ ಕುರಿತಂತೆ ವಿಚಾರ ಸಂಕಿರಣವನ್ನು ನಡೆಸಲಾಗಿದೆ.

ಸಚಿವಾಲಯ ನೌಕರರ ಸಂಘದ ಅವಿರತ ಹೋರಾಟಗಳ ಫಲವಾಗಿ ರೂಪಿಸಲಾದ ಸಿ ಅಂಡ್ ಆರ್ ನಿಯಮಗಳಲ್ಲಿ ಕಲ್ಪಿಸಿದ ಅವಕಾಶದಂತೆ ಎಲ್ಲ ವೃಂದಗಳಲ್ಲಿ ಕಾಲಕಾಲಕ್ಕೆ ಮುಂಬಡ್ತಿಗಳು ದೊರಕುವಂತಾಗಿದೆ. ಸಂಘದ ನಿರಂತರ 2 ವರ್ಷಗಳ ಹೋರಾಟದ ಫಲವಾಗಿ ಸಚಿವಾಲಯದಲ್ಲಿ ಶಾಖಾಧಿಕಾರಿಗಳ ಎಲ್ಲಾ ಹುದ್ದೆಗಳು ಬಡ್ತಿಯಿಂದ ತುಂಬಲ್ಪಟ್ಟವು. ಕಿರಿಯ ಸಹಾಯಕರಾಗಿ ಸೇವೆಗೆ ಸೇರಿದವರು ಕನಿಷ್ಠ ಅಧೀನ ಕಾರ್ಯದರ್ಶಿಗಳಾಗಿ ನಿವೃತ್ತರಾಗುವಂತಹ ಅವಕಾಶ ಈ ದಿನ ಸಚಿವಾಲಯದಲ್ಲಿದೆ.  ಇದರ ಸಂಪೂರ್ಣ ಕೀರ್ತಿ ಸಚಿವಾಲಯ ನೌಕರರ ಸಂಘಕ್ಕೆ ಸಲ್ಲುತ್ತದೆ.

ಸಂಘದಲ್ಲಿ ದುಡಿದ ಸಾಧಕರನ್ನು ಗುರುತಿಸಿ, ಅಂತಹವರಿಗಗಿ ಕಾಂ|| ಮೆರಿ ದೇವಾಸಿಯಾ ಪ್ರಶಸ್ತಿಯನ್ನು ನೀಡಿ ಗೌರವಿಸಲಗುತ್ತಿದೆ. ಇದುವರೆವಿಗೂ ಈ ಪ್ರಶಸ್ತಿಗೆ  ಕಾಂ|| ಕೆ. ಕರುಣಾಕರ ಶೆಟ್ಟಿ ಇವರಿಗೆ ನೀಡಿದ್ದು, ಕಾಂ|| ಎಸ್.ಎಸ್. ಹದ್ಲಿಯವರು ಭಾಜನರಾಗಿತ್ತಾರೆ. ಸರ್ವೊತ್ತಮ ಸೇವಾ ಪ್ರಶಸ್ತಿಯನ್ನು ಪಡೆದ ಸಚಿವಾಲಯದ ಸಾಧಕರಿಗೆ ಸಂಘದ ವತಿಯಿಂದ ಗೌರವವನ್ನು ಸಲ್ಲಿಸಿದ್ದಲ್ಲದೆ, ಸರ್ಕಾರದಲ್ಲಿ ಗಣನೀಯ ಸೇವೆ ಸಲ್ಲಿಸಿದ ಸರ್ಕಾರದ ಮುಖ್ಯ ಕಾರ್ಯದರ್ಶಿಯವರಾದ, ಶ್ರೀ ಎಸ್.ವಿ ರಂಗನಾಥ್, ಅಪರ ಮುಖ್ಯಕಾರ್ಯದರ್ಶಿಯವರಾದ ಶ್ರೀ ಸುಬೀರ್ ಹರಿಸಿಂಗ್, ಶ್ರೀ ಕೆ. ಜೈರಾಜ್ ಮುಂತಾದವರನ್ನು ಸಂಘವು ಆತ್ಮೀಯವಾಗಿ ಬೀಳ್ಕೊಟ್ಟಿದೆ.

ಕಾಂ|| ಎಸ್.ಎಸ್. ಹದ್ಲಿಯವರನ್ನು ಕುರಿತು "ಸಂಗಾತಿ" ಪುಸ್ತಕ, 2012ರಲ್ಲಿ ಕನ್ನಡದ ಸಚಿತ್ರ ಮಾಹಿತಿಗಳನ್ನು ಒಳಗೊಂಡ "ಕನ್ನಡ ನುಡಿ ಪಂಚಾಂಗ" ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಸಂಘದರ್ಭದಲ್ಲಿ "ಹೋರಾಟದ ಶತಮಾನೋತ್ಸವ" ಎಂಬ ಸ್ಮರಣ ಸಂಚಿಕೆಗಳನ್ನು ಸಂಘವು ಹೊರ ತಂದಿದೆ ಕಾಂ|| ಬಿ.ಸಿ. ವಿಜಯಕುಮಾರ್ ಹೊರತಂದ "ಧನ್ಯತೆ" ಪುಸ್ತಕವನ್ನು ಸಂಘದ ವತಿಯಿಮದ ಬಿಡುಗಡೆಗೊಳಿಸುವುದರ ಮೂಲಕ ಸೃಜನಾತ್ಮಕ ಚಟುವಟಿಕೆಯನ್ನು ಹಮ್ಮಿಕೊಂಡಿರುತ್ತದೆ. ಸಚಿವಾಲಯ ಗ್ರಂಥಾಲಯದ ಸಹಯೋಗದೊಂದಿಗೆ "ವಿರಾಮದ ವೇಳೆಯಲ್ಲಿ ವಿಚಾರ ಲಹರಿ" ಎಂಬ ಶೀರ್ಷಿಕೆಯಡಿ ಸಂಘವು ನಾಡಿನ ಅನೇಕ ಸಾಹಿತಿಗಳು, ಕಲಾವಿದರು, ಸಂಪನ್ಮೂಲ ವ್ಯಕ್ತಿಗಳಿಂದ ಸುಮಾರು ಮೂರು ವರ್ಷಗಳವರೆಗೆ ನಿರಂತರವಾಗಿ  ಕಾರ್ಯಕ್ರಮಗಳನ್ನು ಪ್ರತಿ ತಿಂಗಳೂ ನಡೆಸುವ ಮೂಲಕ ಸಚಿವಾಲಯದ ಸಿಬ್ಬಂದಿಗಳಲ್ಲಿ ನೆನಪಿನಲ್ಲಿ ಉಳಿಯಬಹುದಾದ ಕಾರ್ಯಕ್ರಮಗಳನ್ನು ಸಂಘವು ರೂಪಿಸಿರುತ್ತದೆ. 


     ಸಂಘದ ನಿರಂತರ ಕಾರ್ಯಚಟುವಟಿಕೆಯನ್ನು ಗಮನಿಸುತ್ತಿದ್ದ ಸಚಿವಾಲಯದ ಸಿಬ್ಬಂದಿಗಳು ಮತ್ತೆ 2015ರಲ್ಲಿ ಸಂಘಕ್ಕೆ ನಡೆದ ಚುನಾವಣೆಯಲ್ಲಿ ಮಹದೇವಯ್ಯ ಮಠಪತಿಯವರ ತಂಡವನ್ನು ಬೆಂಬಲಿಸಿದ ಕಾರಣ ತಂಡವು  ಜಯಭೇರಿ ಪಡೆಯಿತು. ಮಹದೇವಯ್ಯ ಮಠಪತಿಯವರು ಮತ್ತೆ ಅಧ್ಯಕ್ಷರಾಗಿಯೂ, ರಮೇಶ್ ಗಣೇಶ್ ಸಂಗಾರವರು ಉಪಾಧ್ಯಕ್ಷರಾಗಿ ಹಾಗೂ ಪಿ.ಎನ್. ಕೃಷ್ಣಮೂರ್ತಿಯವರು ಪ್ರಧಾನ ಕಾರ್ಯದರ್ಶಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಯುವ ಪದಾಧಿಕಾರಿಗಳಿಂದ ಕೂಡಿದ ಸಂಘವುಈಗಾಗಲೇ ಕೇಂದ್ರ ಸರ್ಕಾರಿ ನೌಕರರಿಗೆ ನೀಡಲಾಗುತ್ತಿರುವ ವೇತನ ಭತ್ಯೆಗಳನ್ನು ರಾಜ್ಯ ಸರ್ಕಾರಿ ನೌಕರರಿಗೂ ನೀಡುವಂತೆ ಸರ್ಕಾರವನ್ನು ಒತ್ತಾಯಿಸಲು ಸಚಿವಾಲಯದ ಸಿಬ್ಬಂದಿಗಳೊಂದಿಗೆ  ಕಪ್ಪುಪಟ್ಟಿ ಧರಿಸಿ ಕಾರ್ಯನಿರ್ವಹಿಸುವ ಮೂಲಕ ತಮ್ಮ ಪ್ರತಿಭಟನೆಯನ್ನು ವ್ಯಕ್ತಪಡಿಸಿರುತ್ತಾರೆ. ಅನ್ಯ ಇಲಾಖೆಯ ನೌಕರರು ಸಚಿವಾಲಯಲ್ಲಿ ಅನಧಿಕೃತವಾಗಿ ವಿಲೀನಗೊಳ್ಳುತ್ತಿರುವುದನ್ನು ವಿರೋಧಿಸಿ ಸರ್ಕಾರದ ಮುಖ್ಯ ಕಾರ್ಯದರ್ಶಿಯವರ ಕಛೇರಿ ಎದಿರು ಪ್ರತಿಭಟನೆಯನ್ನು ನಡೆಸಿ ಯಶಸ್ವಿಯಾಗಿದೆ. ನಿರಂತರವಾದ ಹೋರಾಟದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರ ಮೂಲಕ ನೌಕರರ ಸಮಸ್ಯೆಗಳಿಗೆ ಸ್ಪಂದಿಸುತ್ತಿದೆ ಹಾಗೂ  ಪರಿಹಾರ ಒದಗಿಸಲು ಪ್ರಾಮಾಣಿಕ ಪ್ರಯತ್ನವನ್ನು ಮಾಡುತ್ತಾ ಬಂದಿದೆ. 


ಸಂಘದ ಅಧ್ಯಕ್ಷರು

ಕ್ರ.ಸಂ
ಅಧ್ಯಕ್ಷರಾಗಿ ಸೇವೆ ಸಲ್ಲಿಸಿದವರು
ಅವಧಿ
1
ಪಿ. ಹೊನ್ನಪ್ಪ
1947-49
2
ಕೆ. ಖಾದರ್ ಮೊಹಿದ್ದೀನ್
1949-56
3
ಎ.ಪಿ. ಮಸಿಲಮೋನಿ
1956-57
4
ಬಿ.ಪಿ. ಪಾಟೀಲ್
1957-58
5
ಕೆ. ಖಾದರ್ ಮೊಹಿದ್ದೀನ್
1960-61
6
ಎ.ಪಿ. ಮಾಸಿಲಾಮಣಿ
1961-62
7
ರಾಮರಾವ್
1962-65
8
ಯತಿರಾಜ್
1966-67
9
ಎನ್. ಬ್ರಹ್ಮದೇವ್
1967-68
10
ಎಂ.ಎನ್. ಸುಬ್ರಹ್ಮಣ್ಯ
1968-70
11
ಬಸವಲಿಂಗಪ್ಪ
1970-75
12
ಸೈಯದ್ ಬಷೀರ್ ಅಹಮದ್
1975-77
13
ಮಹದೇವಯ್ಯ ಮಠಪತಿ
1983-86
14
ಮಹದೇವಯ್ಯ ಮಠಪತಿ
1986-89
15
ನಾಗರತ್ನ ಎಂ.ಎನ್
1990-1992
16
ಮಹದೇವಯ್ಯ ಮಠಪತಿ
1992-
17
ಮಹದೇವಯ್ಯ ಮಠಪತಿ
-2001
18
ಯು.ಬಿ. ಉಳವಿ
2001-2009
19
ಮಹದೇವಯ್ಯ ಮಠಪತಿ
2010-2014
20
ಮಹದೇವಯ್ಯ ಮಠಪತಿ
2015-

ಸಂಘದ ಪ್ರಧಾನ ಕಾರ್ಯದರ್ಶಿಗಳು.


ಕ್ರ.ಸಂ
ಪ್ರಧಾನ ಕಾರ್ಯದರ್ಶಿಯಾಗಿ
 ಸೇವೆ ಸಲ್ಲಿಸಿದವರು
ಅವಧಿ
1
ಎಂ. ಲಕ್ಷ್ಮೀ ನರಸಪ್ಪ
1947-48
2
ಪಿ.ವಿ. ರಾಮಕೃಷ್ಣ
1949-50
3
ಜೆ.ಎನ್. ರಾಧಾಕೃಷ್ಣ
1950-56
4
ಪಿ.ವಿ. ರಾಮಕೃಷ್ಣ
1956-57
5
ಭೀಮರಾವ್
1958-60
6
ಪಿ.ವಿ. ರಾಮಕೃಷ್ಣ
1960-61
7
ಕೆ.ಎಸ್. ಗೌರವ್
1961-62
8
ಸ್ಯಾನ್ಲಿ ಜೋಸೆಫ್
1966-67
9
ಸೈಯ್ಯದ್ ಬಷೀರ್ ಅಹಮದ್
1967-68
10
ಮುನಿಯಪ್ಪ
1968-70
11
ಸೈಯ್ಯದ್ ಬಷೀರ್ ಅಹಮದ್
1970-75
12
ರಾಜಣ್ಣ
1975-77
13
ಕೆ. ಕರುಣಾಕರ ಶೆಟ್ಟಿ
1980-83
14
ಎಸ್.ಎಸ್. ಹದ್ಲಿ
1983-86
15
ಎಸ್.ಎಸ್. ಹದ್ಲಿ
1986-89
16
ಎಂ.ಸಿ. ಪೂಣಚ್ಚ
1990-92
17
ಎಸ್.ಎಸ್. ಹದ್ಲಿ
1992-
18
ಎಸ್.ಎಸ್. ಹದ್ಲಿ
-2001
19
ಆನಂದಪ್ಪ
2001-2009
20
ಬಿ.ಜಿ. ಶ್ಯಾಮಲ
2010-2015
21
ಪಿ.ಎನ್. ಕೃಷ್ಣಮೂರ್ತಿ
2015-


No comments:

Post a Comment